ಆಕಾಶದಲ್ಲಿ ಒಂದು ಬೆಂಕಿಯ ಮರ ಮತ್ತು ಕುದುರೆ ತಲೆ

ಆಕಾಶ ಒಂದು ವಿಸ್ಮಯಗಳ ಆಗರ. ಬರಿಗಣ್ಣಿಗೆ, ಗಾಢ ನೀಲಿ ಹೊದಿಕೆಯ ಮೇಲೆ ಚುಕ್ಕೆಗಳ ಚಿತ್ತಾರವನ್ನು ಬಿಡಿಸಿದಂತೆ ಕಾಣುವ ಈ ಆಕಾಶದ ಕಡೆ ಕ್ಯಾಮೆರ ತಿರುಗಿಸಿದಾಗ ಅಲ್ಲಿ ಕಾಣುವ ಅಚ್ಚರಿಗಳು ಅನೇಕ. ಕಣ್ಣಿಗೆ ಕಾಣದ ನೆಬುಲಗಳು, ಗೆಲಾಕ್ಸಿಗಳು, ನಕ್ಷತ್ರಪುಂಜಗಳು, ಸೂಪರ್ ನೋವಾ ಉಳಿಕೆಗಳು ಇತ್ಯಾದಿ. ಇವುಗಳಲ್ಲಿ ಬಹಳ ಪ್ರಸಿದ್ಧ ನೆಬುಲ ಕುದುರೆ ತಲೆ ನೆಬುಲ. ಕೆಂಪಾಗಿ ಕಂಗೊಳಿಸುವ ಜಲಜನಕದ ಮೋಡಗಳ ನಡುವೆ ಕಪ್ಪಗೆ ಕುದುರೆಯ ತಲೆಯಂತೆ ಕಾಣುವ ಈ ನೆಬುಲ ವಾಸ್ತವದಲ್ಲಿ ಒಂದು ನಕ್ಷತ್ರಗಳ ಉಗಮಸ್ಥಾನ. ಒರಾಯನ್ ನಕ್ಷತ್ರ ರಾಶಿಯ ಅಲ್ನಿಟಕ್ ನಕ್ಷತ್ರದ ದಕ್ಷಿಣಕ್ಕೆ ಕಾಣುವ ಈ ನೆಬ್ಯುಲಾ ಭೂಮಿಯಿಂದ ೧೫೦೦ ಜ್ಯೋತಿರ್ವರ್ಷಗಳಷ್ಟು ದೂರ ಇದೆ. ಅಲ್ನಿಟಕ್ ನಕ್ಷತ್ರದ ಪೂರ್ವಕ್ಕೆ ಬೆಂಕಿಯ ಮರದಂತೆ ಕಾಣುವ “ಬೆಂಕಿ ನೆಬ್ಯುಲಾ” ಕೂಡ ಹೊಸ ನಕ್ಷತ್ರಗಳ ಆಗರ. ಕ್ಷ-ಕಿರಣಗಳ ಅಧ್ಯಯನದಿಂದ ಈ ನೆಬ್ಯುಲಾ ಒಳಗೆ ಸುಮಾರು ೮೦೦ ನಕ್ಷತ್ರಗಳಿರಬಹುದು ಎಂದು ಅಂದಾಜಿಸಲಾಗಿದೆ.

ಕೆಲ ದಿನಗಳ ಹಿಂದೆ ಆಕಾಶ ತಿಳಿಯಾಗಿದ್ದಾಗ ನನ್ನ ದೂರದರ್ಶಕವನ್ನು ಈ ಕಡೆ ತಿರುಗಿಸಿ ಈ ಚಿತ್ರವನ್ನು ಕ್ಲಿಕ್ಕಿಸಿದೆ. ಚಿತ್ರ ತೆಗೆಯಲು ಬಳಸಿದ ಉಪಕರಣದ ಮಾಹಿತಿ ಇಲ್ಲಿದೆ.

ದೂರದರ್ಶಕ: ಸ್ಕೈ ವಾಚರ್ ೮” ಎಫ್/೪

ಕ್ಯಾಮೆರ: ಕ್ಯಾನನ್ ೪೫೦ಡಿ

ಎಕ್ಸ್ಪೋಷರ್: ೩೦೦ಸೆಕೆಂಡು x ೧೬ ಚಿತ್ರಗಳು

ತಂತ್ರಾಂಶ: ಪಿಕ್ಸ್ ಇನ್ಸೈಟ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *